ಚಟುವಟಿಕೆಗಳು

ಹೂವಿನಹೊಳೆ ಪ್ರತಿಷ್ಠಾನದ ಚಟುವಟಿಕೆಗಳು:-

* 2011 ರಿಂದ ಪ್ರತಿ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಹೂವಿನಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆದಿಜಾಂಬವ ಕಾಲೋನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗೊಲ್ಲರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಎಂಜೆಆರ್ ಪ್ರೌಢ ಶಾಲೆ, ಹೂವಿನಹೊಳೆ, ರಾಜ್ಯದ ವಿವಿಧ ಶಾಲೆಗಳಲ್ಲಿ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ. ಇದುವರೆಗೂ 9000 ನೋಟ್ ಬುಕ್ ವಿತರಣೆ ಮಾಡಲಾಗಿದೆ.

*2012
ರಲ್ಲಿಕನ್ನಡ - ಇಂಗ್ಲಿಷ್ ನಿಘಂಟಿಗೆ ಬಹುದೊಡ್ಡ ಕೊಡುಗೆ ನೀಡಿದ ಶತಾಯುಷಿ ಡಾ.ಜಿ.ವೆಂಕಟಸುಬ್ಬಯ್ಯ ಅವರು ಜನ್ಮ ಶತಮಾನೋತ್ಸವ ಹೊತ್ತಿನಲ್ಲಿ ಪ್ರೊ.ಜಿ.ವಿ ಅವರೊಂದಿಗೆ ಯುವ ಸಮೂಹ ಎನ್ನುವ ವಿಶೇಷ ಸಂವಾದ ಕಾರ್ಯಕ್ರಮ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿತ್ತು.

*2012
ರಿಂದ ಪ್ರತಿ ವರ್ಷ ಹೂವಿನಹೊಳೆ ಹಾಗೂ ಅಕ್ಕಪಕ್ಕದ ಸರ್ಕಾರಿ ಕನ್ನಡ ಶಾಲೆ ಮಕ್ಕಳಿಗೆ ವ್ಯಕ್ತಿತ್ವ ವಿಕಾಸನ ತರಗತಿಗಳ ಹಾಗೂ ನಾಡಿನ ಹಿರಿಯ ಸಾಹಿತಿಗಳು ಕುರಿತು ವಿಚಾರ ಮಾಲೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

* 2013
ರಿಂದ ಪ್ರತಿವರ್ಷ ಹೂವಿನಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಆಚರಣೆ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ ಮಾಡಿ ಉತ್ತಮ ಶಾಲಾ ಪ್ರತಿಭೆಗಳನ್ನು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಕಳುಹಿಸಿ ಕೊಡಲಾಗುತ್ತಿದೆ.

*2014
ರಲ್ಲಿ ಹಿರಿಯೂರು ತಾಲ್ಲೂಕಿನ 72 ಗ್ರಾಮಗಳ 100 ಕ್ಕೂ ಹೆಚ್ಚು ಶಾಲೆಗಳಿಗೆ ಪ್ರತಿ ಶಾಲೆಗೆ ಎರಡರಂತೆ 300 ಕಂಪ್ಯೂಟರ್ ವಿತರಣೆ ಕಾರ್ಯಕ್ರಮ ಆಯೋಜನೆ. ಇನ್ಫೋಸಿಸ್ ಸಂಸ್ಥೆಯ ಮಹತ್ವಾಕಾಂಕ್ಷೆಯ ಯೋಜನೆ

* 2014
ರಲ್ಲಿ ಪ್ರಯತ್ನ ಫೌಂಡೆಶನ್ ಜೊತೆ ಸೇರಿ ಹೂವಿನಹೊಳೆಯ ಎಂಜೆಆರ್ ಶಾಲೆ ಮಕ್ಕಳಿಗೆ ವಿಶೇಷ ಶೈಕ್ಷಣಿಕ ಪರಿಕರಗಳು ಹಾಗೂ ನೋಟ್ ಬುಕ್ ವಿತರಣೆ ಮಾಡಲಾಗಿದೆ.

*2015
ರ ಜೂನ್ ತಿಂಗಳಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾವ್ಯ ಮಂಡಲ, ನಮ್ಮವರು ಬಳಗ, ಸೃಷ್ಟಿ ಪ್ರಕಾಶನ, ಸ್ಪರ್ಧಾ ಪ್ರಪಂಚ ಪತ್ರಿಕೆ, ಜೊತೆಗೂಡಿ ಕವಿ ನಾಗತಿಹಳ್ಳಿ ರಮೇಶ್ ಅವರ "ಪದ ಪದ ಚರಿತ" ಕನ್ನಡ ಧ್ವನಿ ಮುದ್ರಿಕೆ ಬಿಡುಗಡೆ ಹಾಗೂ ನಾಡಿನ ಹಿರಿಯ ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ನಾಡು ನುಡಿಯ ಚಿಂತಕರೊಂದಿಗೆ "ಮನದಂಗಳದಿ ಮಾತುಕತೆ " ಕಾರ್ಯಕ್ರಮ ಆಯೋಜನೆಮಾಡಲಾಗಿತ್ತು.

*2015
ರ ಜೂನ್ ತಿಂಗಳಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಸಭಾಂಗಣದಲ್ಲಿ ನವ ಚೇತನ ಮಹಿಳಾ ಸಾಂಸ್ಕೃತಿಕ ವೇದಿಕೆ, ಸ್ಪರ್ಧಾ ಪ್ರಪಂಚ, ಬೆಂಗಳೂರು ರತ್ನ ಪತ್ರಿಕೆ, ಅನೀಕತನ, ಜಾಗೃತಕನ್ನಡ ಪತ್ರಿಕೆ, ಇವರುಗಳ ಜೊತೆಗೂಡಿ "ಒಳಿತಿನಡೆಗೆ ಒಂದು ಪುಟ್ಟ ಹೆಜ್ಜೆ" ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

*2015
ರ ಅಕ್ಟೋಬರ್ 20ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಹೂವಿನಹೊಳೆ ಪ್ರತಿಷ್ಠಾನದ ಮಾನವೀಯ ಮೌಲ್ಯಗಳ ಬಹುದೊಡ್ಡ ಹೆಜ್ಜೆ, ವಿಶ್ವದಜೀವ ಜಲಗಳಾದ ವೃಕ್ಷಮಾತೆ ಶ್ರೀಮತಿ ಸಾಲುಮರದ ತಿಮ್ಮಕ್ಕ, ತಾಯಿ ಪ್ರೀತಿಯ ಕವಿ ಶ್ರೀನಾಗತಿಹಳ್ಳಿ ರಮೇಶ್, ವಿಶಿಷ್ಟ ಚೇತನ ಕುಮಾರಿ ಅಶ್ವಿನಿ ಅಂಗಡಿ ಅವರುಗಳಿಗೆ ನಾಡಿನಹಿರಿಯ ಪತ್ರಕರ್ತರಾದ ಮಾನ್ಯ ಪಿ.ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ. ಎ.ಜೆ ಸದಾಶಿವ ಅವರ ಉದ್ಘಾಟನೆಯೊಂದಿಗೆ, ಹಿರಿಯಸ್ವಾತಂತ್ರ್ಯ ಹೋರಾಟಗಾರರಾದ ನಾಡಿನ ಜೀವಚೇತನ ಡಾ. ಎಚ್.ಎಸ್.ದೊರೆಸ್ವಾಮಿ, ಹಿರಿಯ ಸಾಹಿತಿಗಳಾದ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ), ಡಾ. ಆರ್.ಕೆ.ನಲ್ಲೂರು ಪ್ರಸಾದ್, ಅವರುಗಳ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಅನಿಕೇತನ ಕನ್ನಡ ಬಳಗ, ಮತ್ತು ಕುವೆಂಪು ಕಲಾನಿಕೇತನ ಸಂಸ್ಥೆಯ ಸಹಯೋಗದಲ್ಲಿ "ವಿಶ್ವಾತ್ಮ ಪ್ರಶಸ್ತಿಪುರಸ್ಕಾರ" ವನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ 25.000₹ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

*2015
ರ ಡಿಸೆಂಬರ್ ನಲ್ಲಿ ಹೂವಿನಹೊಳೆ ಪ್ರತಿಷ್ಠಾನವು ಕನ್ನಡ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಯುವ ಬರಹಗಾರ ಕವಿ ಅಡ್ಲೂರು ರಾಜು ಅಷ್ಟೇ ಅವರ ಮೊದಲ ಕವನ ಸಂಕಲನ "ಮಾಗಿಯ ಹನಿಗಳು " ಪುಸ್ತಕವನ್ನು ಪ್ರಕಟಿಸಿದೆ.
ಈ ಸಂಕಲನಕ್ಕೆ 2016ನೇ ಸಾಲಿನ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನಿಡುವ ಸಾಹಿತಿ ಹೆಬ್ಬಾಗೊಡಿ ಗೋಪಾಲ್ ಎಂ - ಜಮುನ ದತ್ತಿ ಪ್ರಶಸ್ತಿ ಲಭಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ನಗರ ಜಿಲ್ಲೆ ಕೊಡಮಾಡುವ ಯುವ ಬರಹಗಾರ ಮೊದಲ ಪುಸ್ತಕ ಬಹುಮಾನ ಸಹ ಈ ಸಂಕಲನಕ್ಕೆ ಲಭಿಸಿದೆ.

*2015
ರಲ್ಲಿಬೆಂಗಳೂರು ನಗರ ಜಿಲ್ಲೆ ಆನೇಕಲ್ ನಗರದಲ್ಲಿ ಚಂದ್ರು ಮಲ್ಟಿಮೀಡಿಯಾ ಸಂಸ್ಥೆಯ ಸಹಯೋಗದಲ್ಲಿ ಸಾರ್ವಜನಿಕರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ "ಕಾಗದ"ಎನ್ನುವ ಹೆಸರಿನಲ್ಲಿ ಸುಮಾರು 2000 ಪುಸ್ತಕಗಳ ಸಂಗ್ರಹದೊಂದಿಗೆ ಉಚಿತ ಗ್ರಂಥಾಲಯವನ್ನು ಆರಂಭಿಸಲಾಗಿದೆ.

*2017
ರಲ್ಲಿ ಬೆಂಗಳೂರು ಹೊರವಲಯದ ಕುಂಬಳಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉನ್ನತಿಗಾಗಿ ಉಚಿತ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಮಾಡಲಾಗಿತ್ತು.
ಶಾಲೆಯ ಅಭಿವೃದ್ಧಿ ಕುರಿತು ಸ್ಥಳೀಯ ಶಾಸಕರ ಗಮನಕ್ಕೆ ತರಲಾಗಿದೆ.

*
ಬೆಂಗಳೂರಿನ ವಾತಾವರಣದಲ್ಲಿ ಇವತ್ತಿನ ದಿನಗಳಲ್ಲಿ ಕನ್ನಡದ ಬಳಕೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ಕನ್ನಡ ಸಾಹಿತ್ಯ, ನಾಡುನುಡಿ ಬಗ್ಗೆ ಜಾಗೃತಿ ಮುಡಿಸುವ ಕಾರ್ಯವನ್ನು ಹೂವಿನಹೊಳೆ ಪ್ರತಿಷ್ಠಾನ ನಿರಂತರವಾಗಿ ನಡೆಯುತ್ತಲೇ ಬಂದಿದೆ, ಇದೀಗ ಪ್ರತಿಷ್ಠಾನದ ಕಚೇರಿಯಲ್ಲಿ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಸಣ್ಣ ಪ್ರಮಾಣದ ಕೆಲಸವನ್ನು ತನ್ನ ವ್ಯಾಪ್ತಿಯಲ್ಲಿ ಮಾಡುತ್ತಿದೆ.

*2017
ರ ನವೆಂಬರ್ 11ರಂದು ಹೂವಿನಹೊಳೆ ಪ್ರತಿಷ್ಠಾನವು ಇನ್ಫೋಸಿಸ್ ಸಮರ್ಪಣ್ ಟ್ರಸ್ಟ್ ಜೊತೆಗೂಡಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿ ಕ್ಲಸ್ಟರ್ ವ್ಯಾಪ್ತಿಯ ಸುಮಾರು 20 ಶಾಲೆಗಳಿಗೆ ಬಳಕೆಯಾಗುವ ದೃಷ್ಟಿಯಿಂದ 1.50.000(ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ)ಬೆಲೆ ಬಾಳುವ "ಉಚಿತ ವಿಜ್ಞಾನ ಶೈಕ್ಷಣಿಕ ಪರಿಕರ" ಗಳನ್ನು ಹೂವಿನಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೇಂದ್ರವಾಗಿಸಿ ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಹಸ್ತಾಂತರ ಮಾಡಲಾಯಿತು.

*2017
ರ ಡಿಸೆಂಬರ್ ನಲ್ಲಿ ಇನ್ಫೋಸಿಸ್ ಸಮರ್ಪಣ್ಟ್ರಸ್ಟ್ ಸಹಯೋಗದಲ್ಲಿ ಹೂವಿನಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಲಾಗಿರುವಉಚಿತ ವಿಜ್ಞಾನ ಶೈಕ್ಷಣಿಕ ಪರಿಕರಗಳ ತರಬೇತಿಯನ್ನು ಹೋಬಳಿ ಮಟ್ಟದ ಎಲ್ಲಾ ವಿಜ್ಞಾನಶಿಕ್ಷಕರಿಗೆ "ಅಗಸ್ತ್ಯ ಫೌಂಡೇಶನ್" ಸಹಯೋಗದೊಂದಿಗೆ ಹೂವಿನಹೊಳೆ ಪ್ರತಿಷ್ಠಾನ ಆಯೋಜನೆ ಮಾಡಲಾಗಿತ್ತು.